ಗಜಮುಖನೆ ಗಣಪತಿಯೇ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ ..
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ನಿನ್ನ ಸನ್ನಿಧಾನದಿ ತಲೆಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು ..
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ ..
ಈರೇಳು ಲೋಕದ ಅಣುಅಣುವಿನಾ
ಇಹಪರದಾ ಸಾಧನಕೆ ನೀನೇ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನಕಿರಣ
ನೀಡಿದರೆ ಸಾಕಯ್ಯಾ ಜನ್ಮ ಪಾವನ ..
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ..
ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮನೆನಿಸು ಎನ್ನ
ಪಾದಸೇವೆ ಒಂದೇ ಧರ್ಮಸಾಧನ ..
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ..
**********************************************************************
ನಮ್ಮ ಬಳಿ ಲಭ್ಯವಿರುವ ಇತರೆ ಭಜನೆಗಳ ಪಟ್ಟಿ
ಗಣಪತಿ ಭಜನೆ
ಭಾಗ್ಯದ ಲಕ್ಷ್ಮೀ ಬಾರಮ್ಮ/bhagyada lakshmi baramma
ಗಣಪತಿ ನೀಡಲು ಅಭಯಾ/ganapathi needalu abhaya